Index   ವಚನ - 20    Search  
 
ದಿನಚರಿಯೆಂಬ ಪಟ್ಟಣದಲ್ಲಿ ಕನಕರತಿಯೆಂಬರಸು, ಮನಸಿಜನೆಂಬ ಪ್ರಧಾನ, ಕನಸಕಂಡಡೆ ಅರಿವ ತಮಸೂನು ತಳವಾರ. ಇವರೆಲ್ಲರ ವಂಚಿಸಿ ಅರಸಿನ ಹೆಂಡತಿ ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದಳು. ಪ್ರಧಾನ ಕಂಡ; ಅರಸು ತಳವಾರ ಕಂಡುದಿಲ್ಲ. ಮನಸಿಜ ಕಂಡು ಬದುಕಿದೆ ಹೋಗೆಂದ. ಅರಸಿಗೆ ಕೂಪನಾದ; ಮಾನಹಾನಿಗೆ ಕೇಡಿಲ್ಲದಂತೆ. ಇಂತೀ ಭೇದವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.