Index   ವಚನ - 29    Search  
 
ಜಲದ ಮಧ್ಯದಲ್ಲಿ ಅಯಿಮೂಲೆಯ ಕೆಲದಲ್ಲಿ ಒಂದು ಹೊಲ ಬೆಳೆಯಿತ್ತು. ಬೆಳೆಯ ಮೇಯ ಬಂದ ಎರಳೆ ತೆನೆಯಿಲ್ಲದ ಮರಿಗಂಡಿತ್ತು. ಆ ಮರಿ ಕಣ್ಣ ತೆಗೆದು ನೋಡಿ ಎನ್ನ ಹೆತ್ತ ತಾಯಿಯಲ್ಲಾಯೆಂದು ಎರಳೆಯ ಮರಿ ನುಂಗಿತ್ತು. ಹೊಲದೊಡೆಯ ಬಂದು ನಿಂದು ನೋಡಿ ಮರಿಯ ಕಂಡು ಅಂಜಿ ಹೊಲಬುದಪ್ಪಿದ. ಹುಲ್ಲೆ ತಪ್ಪಿ ಹೊಲದಣ್ಣ ಕಪ್ಪಿನಲ್ಲಿ ಬಿದ್ದ. ಆ ಹೊಲಬ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.