Index   ವಚನ - 35    Search  
 
ಮರೆಯ ಮನೆಯ ಮಧ್ಯದಲ್ಲಿ ಮನೋವಿಕಾರದ ಮಾನಿನಿ ಹುಟ್ಟಿದಳು. ಹಗಲಿಗೆ ಹಾದರಗಿತ್ತಿ, ಇರುಳಿಗೆ ಸಜ್ಜನೆಯಾಗಿ ಪುರುಷನ ಒಡಗೂಡಿಪ್ಪಳು. ಅವಳಂಗದ ಬಸುರ ಯೋನಿಯ ಕಂಗಳು, ಮನದ ಮೊಲೆ ವಿಪರೀತದ ಮಂಡೆಯ ತುರುಬು ತುಡುಕಿತ್ತು ಮೂರಡಿಯಲ್ಲಿ. ಅವಳ ಒಡಗೂಡುವನಾರೆಂದಲ್ಲಿ ನಿನ್ನ ನೀ ತಿಳಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.