Index   ವಚನ - 34    Search  
 
ಕೋಣನ ಕಿವಿಯಲ್ಲಿ ಮೂರು ಹಸು ತೆನೆ ತುಂಬಿ ಕರವೊಂದನೆ ಈಯಿತ್ತು. ಕರು ತಾಯಿ ನೆರೆ ನೋಡಿ ಹಾಲಿಗೆ ಒಡೆಯರಿಲ್ಲಾ ಎಂದು ಪ್ರಾಣವ ಬಿಟ್ಟಿತ್ತು. ಕರುವಿನ ಹರಣವರಿ; ಅರಿತಡೆ ನಿನ್ನ ನೀನೆ ಭಿನ್ನಭಾವವಿಲ್ಲ. ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.