Index   ವಚನ - 75    Search  
 
ಒಂದಿರುಹಿನ ಗೂಡಿನಲ್ಲಿ ಅಯಿದಾನೆ ಮರಿಯನಿಕ್ಕಿ ಹೋದವು ತಮ್ಮ ಕಾಡಿಗೆ. ಇರುಹು ಮರಿಯ ಕಣ್ಣ ಕಟ್ಟಿ ಮರಿಯ ತೆಗೆದು ಹಾಕಿದವು ತಮ್ಮ ಗೃಹದಿಂದ. ಆನೆ ಬಂದು ನಿಂದು ನೋಡಿ ಇದೇನಾಯಿತ್ತು ಮರಣ ಎಂಬುದಕ್ಕೆ ಮೊದಲೇ ಆನೆ ಸತ್ತು ಇರುಹಿನ ಹಗೆ ಬಿಟ್ಟಿತ್ತು. ಆ ಅರಿವ ಅರಿದು ನೋಡು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.