Index   ವಚನ - 74    Search  
 
ಆರಿಗೂ ತೋರದ ಅಂಬರದಲ್ಲಿ ಒಂದು ಎರಳೆ ಮರಿಯನಿಕ್ಕಿ ಸತ್ತಿತ್ತು. ಮರಿಯ ಮಂಡೆಯ ದೆಸೆಯಲ್ಲಿ ಮರಿ ತಾಯ ನೆರೆನೋಡಿ, ಸತ್ತುದನರಿಯದೆ ಗೊತ್ತ ಮೂಸುತ್ತಿದ್ದಿತ್ತು. ಹೊಲಸಿನ ಗಲವಲು ನಾಸಿಕವ ತಾಗಿ ಸತ್ತುದು ಎಂಬುದನರಿದು ಮರಿ ಬಚ್ಚಬಯಲಾಯಿತ್ತು. ಬಯಲ ತಿಳಿದರಿ ನಿನ್ನ ನೀ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.