Index   ವಚನ - 90    Search  
 
ಸುಖದುಃಖ ಸತಿ ಪುರುಷಂಗೂ ಸರಿ. ಗತಿ ಭೇದ ಕರ್ತೃ ಭೃತ್ಯಂಗೂ ಸರಿ. ನೀರು ನೆಲದಂತೆ, ಸಾರ ಸುಧೆಯಂತೆ ಭಕ್ತ ಜಂಗಮದ ಇರವು. ಕರ್ಪೂರ ಉರಿಯಂತೆ ಇದು ನಿಶ್ಚಯ. ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.