Index   ವಚನ - 93    Search  
 
ಆಡಿನ ಕಾಲ ಮುರಿದು, ಕೋಡಗದ ಹಲ್ಲ ಕಿತ್ತು, ಉಡುವಿನ ಕುಡಿನಾಲಗೆಯ ಕೊಯಿದು, ಬಳ್ಳುವಿನ ಸೊಲ್ಲನರಿದು ಇವೆಲ್ಲವ ನಿನ್ನಲ್ಲಿಗೆ ತಂದೆ; ಇವ ಬಲ್ಲವ ನೀನಲ್ಲದಿಲ್ಲ. ಎನಗೆ ಅಲ್ಲಿಯೊ ಇಲ್ಲಿಯೊ ಮತ್ತೆ ಅಂದು ನೀ ಹೇಳಿದಲ್ಲಿಯೊ ಎಂಬುದ ನಾನರಿಯೆ, ನೀ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.