ಆದಿ ಮಧ್ಯ ಅವಸಾನ ಉಚಿತದ
ಸಾವಧಾನವ ಎಚ್ಚರಿಕೆಯಲ್ಲಿ
ಅಸು ಅಡರುವಾಗ ದೆಸೆದಿಕ್ಕಿನಲ್ಲಿ ಕುಚಿತ್ತ ಭಾವವಿಲ್ಲದೆ
ಅಂತರಿಕ್ಷ ಸುಮಾನತೆಯಲ್ಲಿ, ದ್ವಾರದಲ್ಲಿ ನೀರೆಯ್ದುವಂತೆ,
ಸ್ಫಟಲದಲ್ಲಿ ಪನ್ನಗ ಹೋಹಂತೆ,
ಕುಸುಮದಲ್ಲಿ ಗಂಧ ಸಂಚಾರದಲ್ಲಿ ಸಂಗವ ಮಾಡಿದಂತೆ,
ಮಿಂಚಿನಲ್ಲಿ ತೋರಿದ ಕುಡಿವೆಳಗಿನ
ಗೊಂಚಲ ಸಂಚಲದಂತೆ,
ಅಂಚೆ ಸೇವಿಸುವ ಪಯ ಉದಕದ
ಹಿಂಚುಮುಂಚನರಿದಂತಿರಬೇಕು.
ಸಂಚಿತ ಆಗಾಮಿ ಪ್ರಾರಬ್ಧಕ್ಕೆ ಹೊರಗಾದ
ಮಹಂತನ ಐಕ್ಯದಿರವು.
ಕಂಚಿನ ನಾದ ಸಂಚಾರ ಮುಂಚಿದಲ್ಲಿಯೆ ಲಯ
ನಾರಾಯಣಪ್ರಿಯ ರಾಮನಾಥಾ.
Art
Manuscript
Music
Courtesy:
Transliteration
Ādi madhya avasāna ucitada
sāvadhānava eccarikeyalli
asu aḍaruvāga desedikkinalli kucitta bhāvavillade
antarikṣa sumānateyalli, dvāradalli nīreyduvante,
sphaṭaladalli pannaga hōhante,
kusumadalli gandha san̄cāradalli saṅgava māḍidante,
min̄cinalli tōrida kuḍiveḷagina
gon̄cala san̄caladante,
an̄ce sēvisuva paya udakada
hin̄cumun̄canaridantirabēku.
San̄cita āgāmi prārabdhakke horagāda
mahantana aikyadiravu.
Kan̄cina nāda san̄cāra mun̄cidalliye laya
nārāyaṇapriya rāmanāthā.