ಕಾಷ್ಠವ ಕಾರ್ಮುಗಿಲು ನುಂಗಿತ್ತು
ಹರಿವ ನೀರ ಉರಿ ಕುಡಿಯಿತ್ತು.
ಬಡವ ಬಲ್ಲಿದನ ಕೊಂದು ಸತ್ತ ಠಾವಿನಲ್ಲಿ
ಬಂಧುಗಳೆಲ್ಲರು ಕೂಡಿ ಎತ್ತುವರಿಲ್ಲದೆ ಅರೆವೆಣನಾಯಿತ್ತು.
ಮುಕ್ತಿ ನಾಮ ನಷ್ಟ,
ನಾರಾಯಣಪ್ರಿಯ ರಾಮನಾಥಾ, ಇನ್ನೇವೆನಿನ್ನೇವೆ!
Art
Manuscript
Music
Courtesy:
Transliteration
Kāṣṭhava kārmugilu nuṅgittu
hariva nīra uri kuḍiyittu.
Baḍava ballidana kondu satta ṭhāvinalli
bandhugaḷellaru kūḍi ettuvarillade areveṇanāyittu.
Mukti nāma naṣṭa,
nārāyaṇapriya rāmanāthā, innēveninnēve!