Index   ವಚನ - 41    Search  
 
ಕೋಟೆ ಕೋಳುಹೋಗದ ಮುನ್ನವೆ ಸೂರೆಮಾಡಿದ ಪರಿ ಇನ್ನೆಂತೊ? ಮಾಡುವ ಮಾಟ ಪುರೋಭಿವೃದ್ಧಿಗೆ ಸಲ್ಲದ ಮುನ್ನವೆ ಭಕ್ತಿಯಲ್ಲಿ ತಲ್ಲೀಯವಾದ ಪರಿ ಇನ್ನೆಂತೊ. ಎವೆ ಹಳಚುವುದಕ್ಕೆ ಮುನ್ನವೆ ಅರಿಯಾ ನಾರಾಯಣಪ್ರಿಯ ರಾಮನಾಥನ.