Index   ವಚನ - 64    Search  
 
ನೀಲಮೇಘದ ಭೂಮಿಯಲ್ಲಿ ಕಾಳ ಗೂಳಿ ಹುಟ್ಟಿತ್ತು. ಬಾಲ ಬಿಳಿದು ಕಾಲು ಕೆಂಪು. ಅದರ ಕೋಡು ಕಾಳಕೂಟ. ಅದರ ಬಾಯಿ ಅಸಿಯ ಬಳಗ. ಅದರ ನಾಲಗೆ ಸಾಲು ಲೋಕದ ಸಂಹಾರ. ಅದರ ನಾಸಿಕದ ವಾಸ ಶೇಷನ ಕಮಠನ ಆಶ್ರಯಿಸಿದ ಕ್ಷೋಣಿ. ಇಂತಿವು ಉಚ್ಛ್ವಾಸದಲ್ಲಿ ಆಡುವ ತುಂತುರು ಬಿಂದು. ಇದರಂತುಕದಲ್ಲಿ ನಿಂದು ಹೂಂಕರಿಸಲಾಗಿ ಅಡಗಿತ್ತು ಜಗ, ಉಡುಗಿತ್ತು ಆಕಾಶ. ತಮ್ಮತಮ್ಮ ತೊಡಿಗೆಯ ಬಿಟ್ಟರು, ಮೂರು ಜಾತಿ ಕುಲ ವರ್ಗ. ಇಂತೀ ಗೂಳಿಯ ದೆಸೆಯಿಂದ ಗೋಳಕಾಕಾರವಾದೆ ಗೋಪಾಲಪ್ರಿಯ ರಾಮನಾಥಾ.