Index   ವಚನ - 9    Search  
 
ಎನ್ನ ಅಷ್ಟಾಕ್ಷರ ಸ್ವರೂಪವನೊಳಕೊಂಡು ಎನ್ನ ತನುವಿನಲ್ಲಿ ಸಂಗವಾದನಯ್ಯ ಬಸವಣ್ಣ. ಎನ್ನ ಷಡಾಕ್ಷರ ಸ್ವರೂಪವನೊಳಕೊಂಡು ಎನ್ನ ನಯನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಎನ್ನ ಪಂಚಾಕ್ಷರ ಸ್ವರೂಪವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಪ್ರಭುದೇವರು. ಇಂತೀ ತನು ಮನ ಪ್ರಾಣವೆ ಸಚ್ಚಿದಾನಂದ ಬ್ರಹ್ಮವು. ಆ ಸಚ್ಚಿದಾನಂದ ಬ್ರಹ್ಮವೆ ಎನ್ನ ಭಾವ ಮನ ಕರಣಂಗಳೊಳಗೆ ತಳತಳನೆ ಹೊಳಹುತ್ತಿಪ್ಪ ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ ಸಮುದ್ರದೊಳಗೆ ಮುಳುಗಿದ ವಾರಿಕಲ್ಲಿನಂತಾದೆನಯ್ಯ ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.