Index   ವಚನ - 8    Search  
 
ಆ ಮಹಾಲಿಂಗವೆ ಚಿನ್ನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪರನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪ್ರಣಮನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಮಹಾನಾದಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಚಿದ್ಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪರಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪ್ರಣಮಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಮಹಾಬಿಂದುಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಚಿತ್ಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪರಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪ್ರಣಮಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಪೂರ್ಣಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಮಹಾಕಳಾಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಗೋಳಕಾಕಾರಪ್ರಣಮಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಅಖಂಡಗೋಳಕಾಕಾರ ಪ್ರಣಮಮೂರ್ತಿ ನೋಡಯ್ಯ. ಆ ಮಹಾಲಿಂಗವೆ ಅಖಂಡ ಮಹಾಗೋಳಕಾಕಾರ ಪ್ರಣಮಮೂರ್ತಿ ನೋಡಯ್ಯ. ಆ ಮಹಾಲಿಂಗದ ಮಹಿಮೆ ಗಣಿತಕ್ಕಗಣಿತ ನೋಡ! ಆ ಚಿದ್ಘನಮಹಾಲಿಂಗವೆ ಮಂತ್ರಮೂರ್ತಿ ನೋಡ, ಸಂಗನಬಸವೇಶ್ವರ