Index   ವಚನ - 9    Search  
 
ಆ ಇಷ್ಟಮಹಾಲಿಂಗವೆ ಅನಾದಿಶರಣನ ಆಧಾರಚಕ್ರದಲ್ಲಿ ನಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಆ ಮಹಾಲಿಂಗವೆ ಸ್ವಾಧಿಷ್ಠಾನಚಕ್ರದಲ್ಲಿ ಮಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಆ ಮಹಾಲಿಂಗವೆ ಮಣಿಪೂರಕಚಕ್ರದಲ್ಲಿ ಶಿಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಅನಾಹತಚಕ್ರದಲ್ಲಿ ವಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ವಿಶುದ್ಧಿಚಕ್ರದಲ್ಲಿ ಯಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಆಜ್ಞಾಚಕ್ರದಲ್ಲಿ ಓಂಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಬ್ರಹ್ಮರಂಧ್ರದಲ್ಲಿ ಬಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಶಿಖಾಚಕ್ರದಲ್ಲಿ ಕ್ಷಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಪಶ್ಚಿಮಚಕ್ರದಲ್ಲಿ ವ್ಯಂಜನ ಹಕಾರಮಂತ್ರಮೂರ್ತಿಯಾಗಿ ನೆಲಸಿರ್ಪುದು ನೋಡ! ಈ ಪ್ರಕಾರದಿಂದ ಅನಾದಿಶರಣನ ಸರ್ವಾಂಗದಲ್ಲಿ ಕಿಷ್ಕಿಂದಮಯವಾಗಿ ತುಂಬಿಕೊಂಡಿರ್ಪುದು. ಇಂತಪ್ಪ ಪರಂಜ್ಯೋತಿ ಚಿದ್ಘನ ಮಹಾಲಿಂಗ ಪ್ರಮಾಣಿಸಿ ನೋಡೆನೆಂದವರಿಗೆ ಅತ್ಯತಿಷ್ಠದ್ದಶಾಂಗುಲವಾಗಿರ್ಪುದು ನೋಡ ಸಂಗನಬಸವೇಶ್ವರ