Index   ವಚನ - 13    Search  
 
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಸರ್ವಲೋಕಪಾವನಾವರ್ತಯ ಪರಬ್ರಹ್ಮ ಮಹಾಪ್ರಭು ಅನಾದಿ ಶ್ರೀಗುರುಲಿಂಗಜಂಗಮದ ಚರಣಸೋಂಕಿನಿಂ ಪವಿತ್ರವಾದ ಪರಮಪಾದೋದಕವೆ ಪರಿಪೂರ್ಣಪಾವನಸ್ವರೂಪು ನೋಡಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾನಂದ ಪರಿಪೂರ್ಣ ಅಷ್ಟಾಷಷ್ಠಿ ತೀರ್ಥಂಗಳಿಗೆ ಮೂಲಚೈತನ್ಯಸ್ವರೂಪ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಸರ್ವಲೋಕಪಾವನವಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾನಂದ ಪರಿಪೂರ್ಣ ಪರಬ್ರಹ್ಮಾಮೃತ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಸಕಲಪ್ರಮಥಗಣಂಗಳಿಗೆ ಆಚಾರಶುದ್ಧಿ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಶ್ರೀಗುರುಲಿಂಗಜಂಗಮದ ಪಾದೋದಕವೆ ಚಿದೈಶ್ವರ್ಯ ಸಂಪತ್ತು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಪರಮ ಕೈವಲ್ಯಪದ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಸದ್ಭಕ್ತಿ ಸದಾಚಾರ ದೊರವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಸತ್ಕ್ರಿಯಾ ಸಮ್ಯಜ್ಞಾನ ದೊರವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಸದ್ವರ್ತನೆ ಸತ್ಪಥ ದೊರವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ನಿಜಮೋಕ್ಷವಾಗುವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಚಿತ್ಸುಧಾರಸ ನೋಡ ಸಂಗನಬಸವೇಶ್ವರ