Index   ವಚನ - 23    Search  
 
ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಮಂತ್ರಮಣಿಯೆ ಶ್ರೀಮಹದೈಶ್ವರ್ಯ ಸ್ವರೂಪ ನೋಡ. ಶ್ರೀ ಮಹದೈಶ್ವರ್ಯ ಮಹಾರುದ್ರಾಕ್ಷಿಯ ಸಂಗದಿಂದ ಪರಮಚಿದೈಶ್ವರ್ಯ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಶಿವಗಣಂಗಳ ಭೃತ್ಯಾಚಾರ ಸದ್ಭಕ್ತಿ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಷ್ಕಲಮಹಾಲಿಂಗದ ರತಿಸಂಯೋಗ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ಚತುರ್ವಿಧ, ಷಡ್ವಿಧ, ದಶವಿಧ, ದ್ವಾದಶವಿಧ, ಷೋಡಶ ತೆರದ ಭಕ್ತಿ ಮೊದಲಾಗಿ ನಾಲ್ವತ್ತೆಂಟು ತೆರದ ಸದ್ಭಕ್ತಿ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಕೈವಲ್ಯಪದ ದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ನಿಜಮೋಕ್ಷದೊರವುದಯ್ಯ. ಶ್ರೀ ಮಹಾರುದ್ರಾಕ್ಷಿಯ ಸಂಗದಿಂದ ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು ಶಾಂಭವಲೋಕದ ಶಾಂಭವಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಮರ್ತ್ಯಲೋಕದ ಮಹಾಗಣಂಗಳು ಪ್ರತ್ಯಕ್ಷವಾಗಿ ಅವರ ಪಾದೋದಕ ಪ್ರಸಾದಕ್ಕೆ ಯೋಗ್ಯವೆಂದೆನಿಸುವುದಯ್ಯ. ಶ್ರೀ ಮಹಾರುದ್ರಾಕ್ಷಿಯೇ ಘನಕ್ಕೆ ಘನ ಮಹದೈಶ್ವರ್ಯ ನೋಡ ಶ್ರೀ ಗುರುಲಿಂಗಜಂಗಮದ ಕರುಣ ಕಟಾಕ್ಷಮಣಿಯೆ ಪರಮಚಿದಾಭರಣ ನೋಡ, ಸಂಗಬಸವೇಶ್ವರ