Index   ವಚನ - 78    Search  
 
ಅಯ್ಯ, ಆಚರಣೆಯಲ್ಲಿ ಇಷ್ಟ-ಪ್ರಾಣ-ಭಾವಲಿಂಗಗಳಿಗೆ ಗುರು-ಚರ-ಭಕ್ತರ ಮೂಲಚೈತನ್ಯಮೂರ್ತಿ ಅನಾದಿ ಚಿದ್ಘನ ಪಾದೋದಕ ಪ್ರಸಾದ ಮಂತ್ರಸ್ವರೂಪ ನೋಡ. ಅಯ್ಯ, ಸಂಬಂಧದಲ್ಲಿ ಗುರು-ಚರ-ಭಕ್ತಂಗೆ ಇಷ್ಟ-ಪ್ರಾಣ-ಭಾವಲಿಂಗಂಗಳೆ ಮೂಲಚೈತನ್ಯಮೂರ್ತಿ ಅನಾದಿ ಚಿದ್ಘನ ಪಾದೋದಕ ಪ್ರಸಾದ ಮಂತ್ರಸ್ವರೂಪ ನೋಡ. ಈ ವಿಚಾರವ ನಿನ್ನ ನೀನರಿದಡೆ ಅನಾದಿ ಗುರು-ಚರ-ಭಕ್ತ-ಇಷ್ಟ-ಪ್ರಾಣ-ಭಾವ. ಪಾದೋದಕ-ಪ್ರಸಾದ-ಮಂತ್ರ ನಿನ್ನ ಸರ್ವಾಂಗದಲ್ಲಿ ಉಂಟು ನೋಡ ಸಂಗನಬಸವೇಶ್ವರ.