Index   ವಚನ - 20    Search  
 
ಜ್ಯೋಗಿಯ ತರ್ಕದ ಪ್ರಸ್ತಾವದ ವಚನ : ಬಿದಿರ ಲಳಿಗೆಯ ತಂದು, ಮೂಸೋರೆಯ ಕಾಯಂ ಕಟ್ಟಿ, ಮೇಣದ ಮೆಟ್ಟನಿಕ್ಕಿ, ಕಬ್ಬಿಣದ ಸರಿಗಿಯ ತಂದು ಕಟ್ಟಿಗೆಗೆ ಸುತ್ತಿ ಬಿಗಿದು ಶುದ್ಧೈಸಿ ತ್ರಿವಿಧಗತಿಯಲ್ಲಿ ಹರಿತವಿಕ್ಕಿ, ರಾಜವೀಥಿಯೊಳು ಆ ಕಿನ್ನರಿಯ ನುಡಿಸುತ್ತ ಬೆರೆದಾಡುವ ಜೋಗಿಯ ಕಂಡು ಕೆಟ್ಟು ಹೋದರು ನೋಡಾ ಎಂದು ಬೆರಗಾದ ಗೊಹೇಶ್ವರಪ್ರಿಯ ನಿರಾಳಲಿಂಗ.