ಮೇರುಗಿರಿ ಉದಯಗಿರಿ ನೀಲಗಿರಿ ಹೇಮಗಿರಿ ರಜತಗಿರಿ
ಇಂತೀ ಗಿರಿಗಳಿಗೆ ಛಳಿಯಾದರೆ
ಹೊದ್ದಿಸುವರುಂಟೇನಯ್ಯಾ?
ಆ ಗಿರಿಯ ಕೆಳಗೆ ಗಗನವುಂಟು;
ಆ ಗಗನಕ್ಕೆ ಗವಸಣಿಗೆಯಿಕ್ಕುವರುಂಟೇನಯ್ಯಾ?
ಆ ಗಗನದ ಕೆಳಗೆ ಸಪ್ತಸಮುದ್ರಗಳುಂಟು.
ಅವುಗಳ ನೀರುಡುಗಿದರೆ
ಆ ನೀರ ಕೂಡಿಸುವರುಂಟೇನಯ್ಯಾ?
ಆ ಸಮುದ್ರಂಗಳ ಕೆಳಗೆ ಒಂದು ಮದಸೊಕ್ಕಿದ ಇಲಿ,
ಆ ಇಲಿಯ ತಿಂದೆನೆಂದು ಒಂದು ಮಾರ್ಜಾಲ ಬರಲು,
ಆ ಮಾರ್ಜಾಲನು ಆ ಇಲಿಯ ಕಂಡು ನಿಬ್ಬೆರಗಾಯಿತ್ತು.
ಆ ಇಲಿಯು ಬಂದು ಆ ಮಾರ್ಜಾಲನ ಕಿವಿಯ ತಿಂಬೋದು.
ಅದ ಕಂಡು ಬೆರಗಾದ ನಮ್ಮ
ಗೊಹೇಶ್ವರಪ್ರಿಯ ನಿರಾಳಲಿಂಗ.