Index   ವಚನ - 39    Search  
 
ಕಳ್ಳಆಡಿನ ಕಾಲ ಕಡಿದು, ಕೋಡಗನ ಹಲ್ಲುಕಿತ್ತು, ಓಡ್ಯಾಡುವ ಎರಳೆಯ ತಿರುಳ ತಿಂದು, ಉಡುವಿನ ಕುಡಿನಾಲಗೆಯ ಕೂಡೆವೆಡವರಿದು ತಿಂದು, ದಿನವ ಕಳಿದುಳಿದಾತ ಎನ್ನ ಗುರುವು. ಯಾತಕೆಂದರೆ ಅರಿಕೇಶ್ವರಲಿಂಗವನರಿವುದಕ್ಕೆ ತೆರಪಾಗಿರಣ್ಣಾ ಗೊಹೇಶ್ವರಪ್ರಿಯ ನಿರಾಳಲಿಂಗಾ.