Index   ವಚನ - 77    Search  
 
ದೃಷ್ಟಿ ಕಷ್ಟವ ಮುಟ್ಟುವಲ್ಲಿ ಮೂವರ ಸಂಚವಿಲ್ಲಾಗಿ ಅಟ್ಟಿ ಹರಿದು ಹರಿಯ ಹಿಮ್ಮಡಿಯ ಹಿಡಿದುಕೊಂಡು ಬಿಟ್ಟೆನು. ಕಟ್ಟಿಯಾಳಿದೆ ರುದ್ರನೆಂಬನ, ಗೌರಿ ಸರಸ್ವತಿ ಲಕ್ಷ್ಮಿಯ ಹೋಗೆಂದೆ, ಬ್ರಹ್ಮನ ಕಳುಹಿದೆ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.