Index   ವಚನ - 92    Search  
 
ಪ್ರಾಣಲಿಂಗವ ಪರಲಿಂಗವ ಮಾಡಿ ಇಷ್ಟಲಿಂಗವ ಪೂಜಿಸುವರ ಕಷ್ಟವ ನೋಡಾ! ತೊಟ್ಟಿಲ ಶಿಶುವಿಂಗೆ ಜೋಗುಳವಲ್ಲದೆ ಹೊಟ್ಟೆಯ ಶಿಶುವಿಂಗೆ ಜೋಗುಳವುಂಟೆ? ಬಯಲಾಸೆ ಹಾಸ್ಯವಾಯಿತ್ತು- ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲದ ಕಾರಣ!