Index   ವಚನ - 97    Search  
 
ಬಂಧವಿಲ್ಲದ ಭಾವವಿಲ್ಲದ ಸಂದಿಲ್ಲದ ಸಮರಸವಿಲ್ಲದ, ಸಾಧ್ಯವಿಲ್ಲದ ಭೇದ್ಯವಿಲ್ಲದ ಬೆಳಗಾದಿ ಬೆಳಗುಗಳೇನೊ ಇಲ್ಲದ, ಉಳಿದ ಉಳುಮೆಯೆಂಬ ಹುಟ್ಟು ಹೊಂದಿಲ್ಲದ ನಿರಾಳ ಸುರಾಳವಿಲ್ಲದ ಇವೇನೂ ಏನೂ ಇಲ್ಲದ ಏಕೋಭರಿತ ತಾನೆಯಾಯಿತ್ತಾಗಿ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲುಮಾಣು.