ಭಕ್ತಿಯನರಿಯ ಭಾವವನರಿಯ,
ವಿಚಿತ್ರವನರಿಯ ಚಿತ್ರಾರ್ಥವನರಿಯ,
ತತ್ವವಿಚಾರವ ಮುನ್ನವೆ ಅರಿಯ.
ನಿತ್ಯ ನಿರಂಜನ ಪರವಸ್ತು ತಾನೆಯಾದ ಕಾರಣ
ತನ್ನಿಂದನ್ಯವಾಗಿ ಮುಂದೆ ತೋರುವ ತೋರಿಕೆ ಒಂದೂ ಇಲ್ಲ.
ನಿರಾಳ ನಿರವಯಲು ನಿರಾಕಾರ ಪರವಸ್ತು
ತಾನಲ್ಲದೆ ಮತ್ತೇನೂ ಇಲ್ಲ.
ಚಿಕ್ಕಯ್ಯಪ್ರಿಯ ಸಿದ್ಧಲಿಂಗವೆಂಬುದಕ್ಕೆ
ಎಡೆಯೊಂದು ಇಲ್ಲ, ನಿಲ್ಲು ಮಾಣು.