Index   ವಚನ - 107    Search  
 
ಮಾಯೆ ಉಂಡವರೆಲ್ಲ ಮಹಂತ ಬೋದರು. ದೇಹ ಉಂಡವರೆಲ್ಲ ದೇವರ ಪೂಜಿಸಿದರು. ಪಂಕ್ತಿ ಉಂಡವರೆಲ್ಲ ಪಥಕ್ಕೊಳಗಾದರು. ಸ್ಥಿರ ಉಂಡವರೆಲ್ಲ ಇರದೆ ಹೋದರು. ಹಾಲುಂಡವರೆಲ್ಲ ಹಂಬಲಿಸುತ್ತೈದಾರೆ. ನಾನು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.