Index   ವಚನ - 109    Search  
 
ಮುಟ್ಟಿ ಭಕ್ತನು ಮುನ್ನಲ್ಲ, ಬಿಟ್ಟ ಸೂತಕಿ ಬಳಿಕಲ್ಲ. ನೆಟ್ಟನೆ ತಾನಾಗಿ ಆದಿ ಅಂತ್ಯ ಇಲ್ಲಾಗಿ ಶರಣನು ಮುಟ್ಟಿ ಅಗ್ಘವಣಿಯ ಕೊಡನು. ಹುಟ್ಟಿ ಹೊಂದುವ ಹೂವಿನ ಕಷ್ಟದ ಪೂಜೆಯನು ಮಾಡನು. ಮಾಡಿಸಿಕೊಳ್ಳಲಿಲ್ಲವಾಗಿ ಮುಟ್ಟುವ ಮೂರುತಿ ಮತ್ತೆಯೂ ನಷ್ಟವೆಂಬುದನರಿಯರು ಸೃಷ್ಟಿಯಲ್ಲಿ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಉಂಟೆಂಬರು.