Index   ವಚನ - 113    Search  
 
ಯೋಗದ ಹೊಲಬ ಸಾಧಿಸಬಾರದು. ಯೋಗವೆಂಟರ ಹೊಲಬಲ್ಲ. ಯೋಗ ಒಂಭತ್ತರ ನಿಲವಲ್ಲ. ಯೋಗವಾರರ ಪರಿಯಲ್ಲ. ಧರೆಯ ಮೇಲಣ ಅಗ್ನಿ ಮುಗಿಲ ಮುಟ್ಟದಿಪ್ಪಡೆ ಯೋಗ. ಮನದ ಕಂಗಳ ಬೆಳಗು ಸಸಿಯ ಮುಟ್ಟಿದೆನೆನ್ನದೆ ಘನವ ಮನವನೊಳಕೊಂಡಡದು ಯೋಗ. ವನಿತೆಯರರಿವರನು ಪತಿಯೊಮ್ಮೆ ಕೂಡಿ ತಳುವಳಿದಿರಬಲ್ಲಡದು ಯೋಗ. ಘನಮಹಿಮ ಪ್ರಭುವಿನ ಸಮರಸ ಯೋಗವ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.