Index   ವಚನ - 10    Search  
 
ಅರ್ಥದ ಮೇಲಣ ಆಶೆಯುಳ್ಳನ್ನಕ್ಕರ ಮರ್ತ್ಯಲೋಕದ ಮಹಾಜಂಜರಿ ಬಿಡದಯ್ಯ. ನಾನು ಮರ್ತ್ಯಲೋಕದ ಹಂಬಲ ಹರಿದು, ನಿನ್ನ ನಂಬಿ ನಚ್ಚಿದೆನೆಂಬುದಕ್ಕೆ ಪ್ರತ್ಯಕ್ಷಮಂ ತೋರುತಿರ್ಪೆ ನೋಡಯ್ಯ ಲಿಂಗವೆ. ಅನರ್ಘ್ಯವಾದ ಮುತ್ತು ರತ್ನಂಗಳು ಹೊಂಗೊಡದಲ್ಲಿ ತುಂಬಿ, ನಾನಿರ್ದ ಏಕಾಂತವಾಸಕ್ಕೆ ಉರುಳಿ ಬರಲು ಹಾವ ಕಂಡ ಮರ್ಕಟನಂತೆ ನಾನು ಅಡ್ಡಮೊಗವನಿಕ್ಕಿದೆನೆನೆ ನಿನಗೊಲಿದ ಶರಣನೆಂದು ಭಾವಿಸಿ ಎನ್ನ ಮರ್ತ್ಯಲೋಕದ ಸಂಕಲೆಯಂ ತರಿದು ನಿನ್ನ ಗಣಂಗಳ ಒಳಗುಮಾಡು. ಅದಲ್ಲದೆ ಅದರ ಮೇಲೆ ಕಿಂಚಿತ್ತು ಆಶೆಯಂ ಮಾಡಲೊಡನೆ ಚಂದ್ರಸೂರ್ಯಾದಿಗಳುಳ್ಳನ್ನಕ್ಕ ಎನ್ನ ಹಂದಿ ನಾಯಿ ಬಸುರಲ್ಲಿ ಹಾಕದಿದ್ದೆಯಾದರೆ ನಿನಗೆ ಅಲ್ಲಮಪ್ರಭುವಿನಾಣೆ ಆಳಿನಪಮಾನ ಆಳ್ದಂಗೆ ತಪ್ಪದಯ್ಯಾ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.