Index   ವಚನ - 40    Search  
 
ಓಡು ಒಡಕು ಹುರುಳಿ ಹುಳುಕು ಹುರಿವಾಕೆಯ ಕೈ ಸೊಟ್ಟು ಕಣ್ಣು ಕುರುಡು ಮೆಲುವಾತ ಬೋಡ ಮೂಕೊರೆಗ. ಇಂತಿವರು ತಮ್ಮ ಭೋಗಕ್ಕೆ ಸುರಪತಿಯ ಭೋಗವ ಜರಿವ ನರಿಕುರಿಗಳ ನಾನೇನೆಂಬೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.