Index   ವಚನ - 1    Search  
 
ಅಂಗದೊಳಗೆ ಲಿಂಗವಾಗಿ ಬಂದ ಲಿಂಗವನೆಂತು ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಸೃಷ್ಟಿಯಲ್ಲಿ ಹುಟ್ಟಿ ನಷ್ಟವಹ ಲಿಂಗವನೆಂತು ಮುಟ್ಟಿ ಪೂಜಿಸಿ ಮುಕ್ತಿಯ ಪಡೆವೆನಯ್ಯಾ! ಕಿಚ್ಚು ಕಿಚ್ಚ ಸುಡುವುದೆ ಅಯ್ಯಾ? ಈ ಕಷ್ಟವ ಕಂಡು ಮುಟ್ಟಲಂಜಿ ನಿಮ್ಮಲ್ಲಿಯೇ ನಿಂದೆ, ಸಿಮ್ಮಲಿಗೆಯ ಚೆನ್ನರಾಮಾ.