Index   ವಚನ - 3    Search  
 
ಅನಲನ ಬಣ್ಣದ ಉಲುಹಿನ ರೂಹಿನ ತೋರಿಕೆ ನಿಶ್ಚಯ ದಿಟವೆಂದು ಎಳೆಯ ಕತ್ತಲೆ ಹಳೆಯ ಬಣ್ಣದ ಬಳಿವಿಡಿದಾಡುವಿರಲ್ಲಾ! ಭವಲೇಪ ಲೋಪವಿಲ್ಲವಾಗಿ ಪುಣ್ಯಪಾಪ ಜನಿತರು ಹಿರಿಯರು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದ ಹೆಸರಲ್ಲಿ ಸಂತುಷ್ಟರಿವರು.