Index   ವಚನ - 8    Search  
 
ಆತ್ಮನೆಂತಪ್ಪಡೆ, ನಿರವಯ ನಿರ್ಗುಣ ನಿರ್ವಿಕಾರ! ನೋಡುವಡೆ, ಕರ್ಮವ ಮಾಡುವವರಾರೊ? ಅಲ್ಲಿ ಸಂಸಾರವಾರಿಗೆ ತೋರಿತ್ತೊ? ಬಂಧ ಮೋಕ್ಷಗಳಾರಿಗೆ, ಎಲೆ ಅಯ್ಯಾ? ನಿನ್ನ ನಿನ್ನಿಂದ ತಿಳಿದು ನೋಡಲು ತಥ್ಯಮಿಥ್ಯಗಳೊಂದಕ್ಕೊಂದು ತಟ್ಟಲರಿವವೆ? ಪುಸಿಮಾಯೆ ತೋರಿತ್ತು ; ಸೋಜಿಗ, ಭ್ರಮೆ! ದಿಟ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!