Index   ವಚನ - 7    Search  
 
ಅಳಿವ ತೋರಿಕೆಗಾದಿಯಿಲ್ಲ, ಕಳಿವ ಭ್ರಾಂತಿಗೆ ಲಕ್ಷ್ಯವಿಲ್ಲ. ತಿಳಿವೆನಿನ್ನೇನ ಹೇಳಾ! ಬೆಳಗ ತೋರಿಸುವ ಬೆಳಗೊಂದಿಲ್ಲವಾಗಿ ಸ್ವಯಂಪ್ರಕಾಶ ಪರಿಪೂರ್ಣವಾದ ನಿಜವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.