Index   ವಚನ - 25    Search  
 
ಏನೆಂದನಲಿಲ್ಲದ ಮಹಾಘನವು ತನ್ನ ಲೀಲೆಯಿಂದ ತಾನೇ ಸ್ವಯಂಭುಲಿಂಗವಾಯಿತ್ತು! ಆ ಲಿಂಗದಿಂದಾಯಿತ್ತು ಶಿವಶಕ್ತ್ಯಾತ್ಮಕ, ಆ ಶಿವಶಕ್ತ್ಯಾತ್ಮಕದಿಂದಾದುದು ಆತ್ಮ, ಆತ್ಮನಿಂದಾದುದು ಆಕಾಶ, ಆಕಾಶದಿಂದಾದುದು ವಾಯು, ವಾಯುವಿನಿಂದಾದುದು ಅಗ್ನಿ, ಅಗ್ನಿಯಿಂದಾದುದು ಅಪ್ಪು, ಅಪ್ಪುವಿನಿಂದಾದುದು ಪೃಥ್ವಿ, ಪೃಥ್ವಿಯಿಂದಾದುದು ಸಕಲ ಜೀವವೆಲ್ಲಾ. ಇವೆಲ್ಲಾ ನಿಮ್ಮ ನೆನಹುಮಾತ್ರದಿಂದಾದವು ಸಿಮ್ಮಲಿಗೆಯ ಚೆನ್ನರಾಮಾ.