ಕವಿ ಗಮಕಿ ವಾದಿ
ವಾಗ್ಮಿಯೆಂಬವರ ಮಾತಿಂಗಿಲ್ಲ.
ಶಾಸ್ತ್ರಿಕರ ಶಾಸ್ತ್ರಕ್ಕಿಲ್ಲ,
ತರ್ಕಿಗಳ ತರ್ಕಕ್ಕಿಲ್ಲ.
ಶಬ್ದಿಕರ ಶಬ್ದ ನೆರೆಯವ
ತೋರುವಡೆ ವಿಷಯವಾಗಿರದು.
ಅರಿವೊಡೆ ಅತರ್ಕ್ಯ,
ಅದು ನಿನ್ನಲ್ಲಿಯೆ ಅದೆ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Kavi gamaki vādi
vāgmiyembavara mātiṅgilla.
Śāstrikara śāstrakkilla,
tarkigaḷa tarkakkilla.
Śabdikara śabda nereyava
tōruvaḍe viṣayavāgiradu.
Arivoḍe atarkya,
adu ninnalliye ade,
sim'maligeya cennarāmā.