Index   ವಚನ - 62    Search  
 
ತನುವೆಂಬುದು ನಿಮ್ಮ ನಿಜವ ಕಾಣಲೀಯದು. ಮನವೆಂಬುದು ನಿಮ್ಮ ದಿಟವ ಕಾಣಲೀಯದು. ಹಮ್ಮು ಬಿಮ್ಮು ಅನೃತ ಅಸತ್ಯ ಅವಿದ್ಯ ಈ ಪಂಚವಿಷಯ ಅಜ್ಞಾನಭಾವಕ್ಕೆ ಮೂಲವಯ್ಯಾ. ಅರಿವು ನಿನ್ನೊಡಲಾಗಿ ಮರವೆಯ ಮರೆದೆನೆಂಬುದು ಮಿಥ್ಯ ತಿಳಿದಳಿದುಳಿದ ಬಚ್ಚಬರಿಯರಿವು ಸಚ್ಚಿದಾನಂದ ಸ್ವರೂಪ ನೀನೆ, ಸಿಮ್ಮಲಿಗೆಯ ಚೆನ್ನರಾಮ.