ತಾಮಸ ಸಂಬಂಧ ಕನಿಷ್ಟಂಗೆ
ಹುಸಿ ಜಾಗ್ರ ದಿಟದಂತೆ ತೋರುಗು.
ರಾಜಸ ಸಂಬಂಧ ಮಧ್ಯಮಂಗೆ
ಹುಸಿ ತೂರ್ಯ ದಿಟದಂತೆ ತೋರುಗು.
ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ
ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ.
ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ
ತೂರ್ಯಾತೀತವಪ್ಪ ತತ್ತ್ವ
ಇಂತುಂಟೆಂದು ತಿಳಿದ ತಿಳಿವು ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.