Index   ವಚನ - 69    Search  
 
ತೋರುವಡೆ ವಿಷಯವಾಗಿರದು, ಅದು ಅರಿಯಬಾರದಾಗಿ ಅರಿಯಬಾರದು, ಅರಿಯಬಾರದಾಗಿ ಹೇಳಬಾರದು, ಹೇಳಬಾರದಾಗಿ ಕಾಣಬಾರದು. ಅದು ಅತರ್ಕ್ಯ, ಅದು ನಿನ್ನಲ್ಲಿಯೆ ಇದೆ. ಅದ ಹೇಳಲಿಲ್ಲ ಕೇಳಲಿಲ್ಲ ಅರಿಯಲಿಲ್ಲ. ಅದನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.