Index   ವಚನ - 86    Search  
 
ನೆನೆದೆನೆಂಬಲ್ಲಿ ಎನ್ನ ಮನದಿಂದ ತೊಲಗಿಪ್ಪನೆ? ಅರಿದೆನೆಂಬಲ್ಲಿ ಎನಗೆ ಆತಗೆ ಕಂಡರಿತವುಂಟೆ? ಇಲ್ಲದ ಮಾತ ತಂದು ಅಲ್ಲಲ್ಲಿ ಆಡುವಿರಿ! ನಿಮ್ಮ ಬಲ್ಲತನಕ್ಕೆ ನಾನಂಜುವೆ ಕಾಣಿರೊ! ಸಲ್ಲದು! ನಿಮ್ಮ ಮಾತು ನಿಲ್ಲಲಿ! ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ನಾನೆ ಕಾಣಾ! ಜಡನೆ!