ಪರಮಾತ್ಮನಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ.
ಅಂತರಾತ್ಮನ ಪ್ರತಿಲಹರಿಯಿಂದ ಜೀವಾತ್ಮನುತ್ಪತ್ತ.
ಅಂತಪ್ಪ ಜೀವಾಂತರಾತ್ಮಾದಿಗಳು
ಅಂಗಪ್ರಾಣವಾದಲ್ಲಿ ಒಂದೆಯೆನಿಸಿದರು.
ಆ ಒಂದೆಯೆಂಬ ತಾಮಸ ಜೀವನು
ಅಂಗನೆಯರ ಸಂಗ ಮೊದಲಾದ
ನಾನಾ ದುಃಖಗಳಲ್ಲಿ ನೋವುತ್ತ,
ನಾನಾಯೋನಿಗಳಲ್ಲಿ ಜನಿಸುತ್ತ,
ರೌರವ ನರಕ ಆಳುತ್ತ ಮುಳುಗುತ್ತಲಿಹನು.
ಆ ಪರಮಾತ್ಮನು ಜೀವಾತ್ಮನ ಶಿರೋಮಧ್ಯದಲ್ಲಿರ್ದು
ನಾಹಂ ಎನ್ನದೆ ಸೋಹಂ ಎನ್ನುತ್ತ
ಸಿಮ್ಮಲಿಗೆಯ ಚನ್ನರಾಮನೆಂಬ
ಅಖಂಡಲಿಂಗದೊಳಗೆ ನಿತ್ಯತ್ವವನೆಯ್ದಿ
ಎಡೆಬಿಡುವಿಲ್ಲದೆ ಪರಮಸಂತೋಷದೊಳಿದ್ದಿತ್ತು.
Art
Manuscript
Music
Courtesy:
Transliteration
Paramātmanapratilahariyinda antarātmanutpatya.
Antarātmana pratilahariyinda jīvātmanutpatta.
Antappa jīvāntarātmādigaḷu
aṅgaprāṇavādalli ondeyenisidaru.
Ā ondeyemba tāmasa jīvanu
aṅganeyara saṅga modalāda
nānā duḥkhagaḷalli nōvutta,
nānāyōnigaḷalli janisutta,
raurava naraka āḷutta muḷuguttalihanu.
Ā paramātmanu jīvātmana śirōmadhyadallirdu
nāhaṁ ennade sōhaṁ ennutta
sim'maligeya cannarāmanemba
akhaṇḍaliṅgadoḷage nityatvavaneydi
eḍebiḍuvillade paramasantōṣadoḷiddittu.