Index   ವಚನ - 103    Search  
 
ಬಲುಹಾಗಿ ತತ್ವವಡಸಿದಾತ ಸತ್ತನೆ? ಕರಗುವ ತತ್ಪುಂಜನೆಯ ಕರಣವ ತಪ್ಪಿಸಿ ಪ್ರವೇಶಿಸುವಾತ ಸಂಚರಿಸುವ ತದ್ಭ್ರಮೆಯಿಂದ ಬಯಲ ಕರಣಂಗಳಿಗೆಡೆ ಗೊಡುವ ಕತದಿಂ ಪಂಚಮಹಾರೂಪನ ಅಹಂಭಾವದ ಜೀವನಿಂದ ರಾಗಾದಿ ಮಲತ್ಯಾಗದಿಂದ, ಸಕಲ ಕರಣ ವ್ಯಾಪಾರದಿಂದ, ಉತ್ತುಂಗ ಪದೋನ್ನತಿಯಿಂದ ಸಮವೆನೆ, ಕರಣದೊಳಿಪ್ಪರಿವಿಂದೆ ಚೇಷ್ಟಿಸುವನಾಗಿ ಪ್ರಾಣಾದಿರೂಪನು. ತಾ ನುಡಿದುದ ತಾನೆ ಕೇಳುವ, ಲೇಸೆಂಬುದ ಹಿಡಿವ, ಮುಂದೆ ನೇತಿಗತಿಯ ಕರಣಂಗಳ ಕಾಬ, ಹೊಲ್ಲಹದವ ಬಿಡುತ್ತ ಸೇವಿಸುವ, ಸ್ವಚ್ಛಾಂಗ ಸುಖವಾಸನೆಗೆರಗುವ, ಕರ್ಮೇಂದ್ರಿಯದ ಬುದ್ಧೀಂದ್ರಿಯಾನಂದ ತಾನೆಂಬುದನಾರೂ ಅರಿಯರಯ್ಯಾ! ನೋಡಲೇನದ ನಿಶ್ಚಯಿಸಿ ನಾ ಬಲ್ಲೆನೆಂಬ ಅರಿದು ಮರೆಯದಂತೆ ರೂಪನಪ್ಪಿ ಸೋಹಮೆಂಬುದು ಜೀವ. ಇಂತಪ್ಪ ಸರ್ವದೃಷ್ಟವನೊಳಕೊಂಡು. ಪಂಚವಿಂಶತಿಯಾಗಿ ತೋರುವ ತೋರಿಕೆಯೆಲ್ಲಾ ಹುಸಿಯೆಂದರಿದರಿವು ನಿಜತತ್ತ್ವ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.