Index   ವಚನ - 109    Search  
 
ಭಕ್ತರ ನಿರ್ಮಳ ಭಕ್ತಿ ಏನೆಂದರಿಯದ ಯುಕ್ತಿಶೂನ್ಯನಪ್ಪ ಅಹಂಕಾರಿ ಮರುಳನನೆಂತು ಗುರುವೆಂಬೆ? ಪ್ರಕೃತಿಧರ್ಮವನಾತ್ಮಂಗೇರಿಸಿ ಕಾಬ ಜಡ ನರನನೆಂತು ಗುರುವೆಂಬೆ? ಭಾವಶುದ್ಧಿಯಾಗದೆ ಕೆಮ್ಮನೆ ತಪ್ಪುಗೊಂಬ ಜಡ ನರನನೆಂತು ಗುರುವೆಂಬೆ? ಶರಣರಲಿ ಗುಣದೋಷವನೇನುವರಸದೆ ಸುಖವ ಮಾಡುವಾತನ ಗುರುವೆಂದು ನಂಬುವೆ ಸಿಮ್ಮಲಿಗೆಯ ಚೆನ್ನರಾಮಾ.