ಸತ್ಯ ಜ್ಞಾನ ಪರಿಪೂರ್ಣಾನಂದ
ಪರಮವಿದ್ಯೆಯದೇಕೊ?
ಜಡ ದುಃಖ ದೇಶಿಕ ಕಲ್ಪಿತ ಅಕಲ್ಪಿತ
ಅಲ್ಲಿ ಕಲ್ಪಿತ ಪರಮನ ಕಟ್ಟಿದ ನೋಡಾ,
ಪರಮ ಕಲ್ಪಿತನ ಕಟ್ಟಿದನೊ ಹೇಳಯ್ಯಾ.
ಅಲ್ಲಿ ಬಂಧವಾರಿಗೆ ಮೋಕ್ಷವಾರಿಗೆ ಹೇಳಯ್ಯಾ.
ನಿನ್ನಿಂದ ನಿನ್ನ ತಿಳಿದು ನೋಡು.
ತಥ್ಯಮಿಥ್ಯಗಳೊಂದನೊಂದು ಕಟ್ಟಲರಿದವೆ ಹೇಳು?
ಹುಸಿ ತೋರಿಕೆ ದಿಟತಾನೆ?
ಸಿಮ್ಮಲಿಗೆಯ ಚೆನ್ನರಾಮಾ.