Index   ವಚನ - 143    Search  
 
ಸಮುದ್ರದಿಂದಾದ ತೆರೆಗಳು ಸಮುದ್ರದೊಳಗಡಗುತ್ತ ಆ ಸಮುದ್ರದೊಳಗೇ ಇಹವು. ತೆರೆಗಳು ಬೇರೊಂದುದಕವೆ? ನಿಮ್ಮಿಂದಲಾದ ಜಗವು ನಿಮ್ಮಲ್ಲಿಯೆ ಇದ್ದು ನಿಮ್ಮಲ್ಲಿಯೆ ಅಡಗುವುದು. ಬೇರೆ ಬೇರೆ ಕುಲವುಂಟೆ ಈ ಜಗಕ್ಕೆ? ಅದೆಂತೆಂದಡೆ: ಬ್ರಹ್ಮಬೀಜಂ ಜಗತ್‍ಸರ್ವಂ ಬ್ರಹ್ಮಣೈವ ವಿವರ್ಧತೇ| ಬ್ರಹ್ಮಣ್ಯೇವ ಲಯಂ ಯಾತಿ ಜಾತಿಭೇದಃ ಕಥಂ ಭವೇತ್|| ಇಂತೆಂದುದಾಗಿ, ಕುಲವೂ ಇಲ್ಲ ಛಲವೂ ಇಲ್ಲ. ಮರೆಯ ನುಡಿಯನೊಪ್ಪುವನೆ? ಸಿಮ್ಮಲಿಗೆಯ ಚೆನ್ನರಾಮ, ಬಿಡು ಜಡನೇ.