ಸಾವು ತಡವಲ್ಲ, ನರಕ ದೂರವಲ್ಲ,
ಕೆಮ್ಮನೆ ಕೆಡಬೇಡ.
ವಿಷಯವ ಬಿಡು,
ಗುರುಭಕ್ತಿಯ ನಂಬು ಸುಖಿಯಪ್ಪೆ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Sāvu taḍavalla, naraka dūravalla,
kem'mane keḍabēḍa.
Viṣayava biḍu,
gurubhaktiya nambu sukhiyappe,
sim'maligeya cennarāmā.