Index   ವಚನ - 146    Search  
 
ಸ್ಥಾಣುಚೋರರಜ್ಜುಸರ್ಪಮೃಗತೃಷ್ಣೆಕನಸು, ಇಂದ್ರಜಾಲ ಗಂಧರ್ವನಗರವೆಂಬ ಭ್ರಮೆಗಳ ಹುಸಿಯೆಂದರಿದವನು ಪ್ರಪಂಚ ಹೇಳಲರಿಯದಿರ್ದಡೆ ದಿಟವಪ್ಪುದೆ? ವಿಚಾರಿಸಿ ನೋಡಲು ಜಗ ಹುಸಿ, ದಿಟ ತಾನೆಂದರಿದಾತನ ಅರಿವು ಕೆಡಲರಿವುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.