Index   ವಚನ - 30    Search  
 
ಗುರುಲಿಂಗದಲ್ಲಿ ಇಲ್ಲದ ಒಲವು ಪರದೈವದಲಾದೂದೆಂಬಿರಿ, ಶರಣು ಶರಣೆನಲರಿಯದೆ ಬರುದೊರೆವೋದಿರಲ್ಲ. ಜನನ ಮರಣರಹಿತ ಕೂಡಲಚೆನ್ನಸಂಗನ ಶರಣರಿಗೆ ಶರಣೆನ್ನದೆ ಬರುದೊರೆವೋದಿರಲ್ಲ.