Index   ವಚನ - 118    Search  
 
ಪೃಥ್ವಿಯಂತಹ ಭಕ್ತ, ಉದಕದಂತಹ ಮಾಹೇಶ್ವರ, ಅಗ್ನಿಯಂತಹ ಪ್ರಸಾದಿ, ವಾಯುವಿನಂತಹ ಪ್ರಾಣಲಿಂಗಿ, ಆಕಾಶದಂತಹ ಶರಣ, ಚಂದ್ರನಂತಹ ನೇಮಸ್ತ, ಸೂರ್ಯನಂತಹ ಅನುಭವಿ, ಆತ್ಮನಂತಹ ಐಕ್ಯ- ಇಂತೀ ಅಷ್ಟತನು ಗಟ್ಟಿಗೊಳಿಸಿದ, ಕೂಡಲಚೆನ್ನಸಂಗನ ಶರಣನು ಅನಂತ ಕುಳರಹಿತನು.