Index   ವಚನ - 124    Search  
 
ಕಾಮಿಸಿದಲ್ಲದೆ ಕೊಡದು ಕಾಮಧೇನು, ಕಲ್ಪಿಸಿದಲ್ಲದೆ ಕೊಡದು ಕಲ್ಪವೃಕ್ಷ, ಚಿಂತಿಸಿದಲ್ಲದೆ ಕೊಡದು ಚಿಂತಾಮಣಿ, ಭಾವಿಸಿದಲ್ಲದೆ ಕೊಡನಾ ಶಿವನು. ಕಾಮಿಸದೆ ಕಲ್ಪಿಸದೆ ಚಿಂತಿಸದೆ ಭಾವಿಸಿದೆ ಕೊಡಬಲ್ಲರು, ಕೂಡಲಚೆನ್ನಸಂಗಾ ನಿಮ್ಮ ಶರಣರು.